ಆನೆಗಳ ಗಣತಿ ಆರಂಭ…! ಕಬಿನಿ ಹಿನ್ನೀರಿನಲ್ಲಿ ಆಹಾರ & ನೀರು ಹುಡುಕಿ ಬಂದ ಆನೆಗಳ ಹಿಂಡು

admin
1 Min Read

ಕಬಿನಿರಿನಲ್ಲಿ ನೂರಾರು ಆನೆಗಳು…ಅರಣ್ಯ ಇಲಾಖೆಯು ಈಗ ದಕ್ಷಿಣದ ರಾಜ್ಯಗಳಲ್ಲಿ ಆನೆ ಗಣತಿಯನ್ನು ನಡೆಸಲು ಮುಂದಾಗಿದೆ. ಮೂರು ದಿನಗಳ ಗಣತಿಯು ಮೇ 17ರಿಂದ ಪ್ರಾರಂಭವಾಗಲಿದೆ.ಅಖಿಲ ಭಾರತ ಗಣತಿಯನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇನ್ನೂ ಘೋಷಿಸದ ಕಾರಣ ಕರ್ನಾಟಕ ಅರಣ್ಯ ಇಲಾಖೆಯು ಈ ಪ್ರಕ್ರಿಯೆಯನ್ನು ಪ್ರಾರಂಭಿಸುವಲ್ಲಿ ಮುಂದಾಳತ್ವ ವಹಿಸಿದೆ. ಆನೆ ಗಣತಿಯು ನೇರ ಮತ್ತು ಪರೋಕ್ಷ ಮೌಲ್ಯಮಾಪನ ವಿಧಾನಗಳನ್ನು ಒಳಗೊಂಡಿರುತ್ತದೆ. ನೀರಿನ ಹೊಂಡಗಳಲ್ಲಿ ಎಣಿಕೆ, ಸಗಣಿ ವಿಶ್ಲೇಷಣೆ, ಸೇರಿದಂತೆ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ. ಗಣತಿಯನ್ನು ಒಂದೇ ಸ್ವರೂಪದಲ್ಲಿ ಮತ್ತು ಅದೇ ಸಮಯದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾದಲ್ಲಿಯೂ ಮಾಡಲಾಗುತ್ತದೆ. ಇದು ಅಲೆದಾಡುವ ಆನೆಗಳ ಸಂಖ್ಯೆಯನ್ನು ತಿಳಿಯಲು ನೆರವಾಗುತ್ತದೆ.

ಕರ್ನಾಟಕದ ಆನೆಗಳು ಈ ಎರಡು ರಾಜ್ಯಗಳಲ್ಲಿ ಹೆಚ್ಚಾಗಿ ಅಲೆದಾಡುತ್ತಿರುವ ಕಾರಣ ಮಹಾರಾಷ್ಟ್ರ ಮತ್ತು ಗೋವಾವನ್ನು ಸಹ ಗಣತಿಯ ವ್ಯಾಪ್ತಿಗೆ ತರಲಾಗಿದೆ ಎಂದು ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿ ರಾಜೀವ್ ರಂಜನ್ ತಿಳಿಸಿದ್ದಾರೆ.ಕರ್ನಾಟಕವು ಆರೋಗ್ಯವಂತ ಹುಲಿ ಮತ್ತು ಆನೆಗಳ ತವರು. ಕಳೆದ ಆನೆಗಳ ಗಣತಿಯ ಪ್ರಕಾರ ಕರ್ನಾಟಕದಲ್ಲಿ 6,000 ಆನೆಗಳಿದ್ದು, ಅರಣ್ಯ ಅಕಾರಿಗಳು ತಮ್ಮ ನಿರೀಕ್ಷೆಗಳನ್ನು ನಿರ್ದಿಷ್ಟಪಡಿಸದಿದ್ದರೂ, ರಾಜ್ಯವು ಏರಿಕೆಯನ್ನು ದಾಖಲಿಸುವ ನಿರೀಕ್ಷೆಯಲ್ಲಿದೆ.

ಗಣತಿಗಾಗಿ ಎಲ್ಲ ರಾಜ್ಯಗಳ ಅರಣ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಗಣತಿಯನ್ನು ದಾಖಲಿಸಲಾಗುತ್ತದೆ ಮತ್ತು ಛಾಯಾಚಿತ್ರ ತೆಗೆಯಲಾಗುತ್ತದೆ. ಕ್ಯಾಮೆರಾ ಟ್ರ್ಯಾಪ್ ಚಿತ್ರಗಳನ್ನು ಸಹ ಬಳಸಲಾಗುತ್ತದೆ. ನೀಲಗಿರಿ ಜೀವಗೋಳದಲ್ಲಿ ಅತಿ ಹೆಚ್ಚು ಆನೆಗಳು ನೆಲೆಸಿರುವ ನಿರೀಕ್ಷೆಯಿದೆ.

ಮಾನವ-ಆನೆ ಸಂಘರ್ಷದ ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ, ಈ ಬಾರಿ ಮೌಲ್ಯಮಾಪನಕ್ಕೆ ಸ್ವಯಂಸೇವಕರು ಅಥವಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳದಿರಲು ಅರಣ್ಯ ಇಲಾಖೆ ಅಕಾರಿಗಳು ನಿರ್ಧರಿಸಿದ್ದಾರೆ. ಸಿಬ್ಬಂದಿ ಮತ್ತು ಜನರ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಂಜನ್ ಹೇಳಿದ್ದಾರೆ.

Share this Article
Leave a comment