ಸಮಾಜ ಸೇವಕ ಸಿರಾಜುರವರಿಂದ ನೊಂದ ರೈತನಿಗೆ ಸಾಂತ್ವಾನ….

Janata Theerpu
1 Min Read

ಬೀಸಿದ ಭಾರಿ ಗಾಳಿಗೆ ಬಾಳೆ ಬೆಳೆ ನಷ್ಟವಾಗಿ ಸಂಕಷ್ಟಕ್ಕೆ ಸಿಲುಕಿದ್ದ ರೈತನಿಗೆ ಸಾಂತ್ವಾನ ಹೇಳಿ ನಷ್ಟ ಬರಿಸಿ ಕೊಡುವ ಭರವಸೆ ಕೊಟ್ಟ ಸಮಾಜಸೇವಕ ಸಿರಾಜ್….
ಎಚ್ ಡಿ ಕೋಟೆ ತಾಲೂಕಿನ ಎನ್ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪನ ಹಾಡಿ ಜಮೀನಿನಲ್ಲಿ ಬೆಳೆದಿದ್ದ ಎಂ.ಡಿ.ದೇವೇಸೆಗೌಡ ಬೆಳೆದಿದ್ದ ಬಾಳೆ ಬೆಳೆ, ಬೀಸಿದ ಬಾರಿ ಬಿರುಗಾಳಿಗೆ ಸಂಪೂರ್ಣವಾಗಿ ಹಾನಿಯಾಗಿತ್ತು ಹಾನಿಗೊಳಗಾಗಿ ರೈತ ಸಂಕಷ್ಟ ಪಡುವುದನ್ನು ಜನತಾ ತೀರ್ಪು ಸುದ್ದಿವಾಹಿನಿಯಲ್ಲಿ ಪ್ರಸಾರ ಮಾಡಲಾಗಿತ್ತು ಈ ಸುದ್ದಿ ವೀಕ್ಷಿಸಿದ ಸಮಾಜಸೇವಕ ಸಿರಾಜ್ ರವರು ಹಾಗೂ ಅಭಿಮಾನಿ ಬಳಗದ ಸದಸ್ಯರು ಕೆಂಪನ ಹಾಡಿಗೆ ಭೇಟಿ ನೀಡಿ ರೈತನಿಗೆ ಸಾಂತ್ವನ ಹೇಳಿ… ಬಾಳೆ ಬೆಳೆಗೆ ಖರ್ಚಾಗಿರುವ ಖರ್ಚುವೆಚ್ಚದ ಮಾಹಿತಿ ಪಡೆದು ಚುನಾವಣೆ ಸಂದರ್ಭವಾದ್ದರಿಂದ ಈಗ ಹಣದ ವಿಚಾರ ಮಾತಾಡುವ ಸಂದರ್ಭವಲ್ಲ ಚುನಾವಣೆ ಮುಗಿದ ತಕ್ಷಣವೇ ಮತ್ತೆ ಬಂದು ತಕ್ಷಣವೇ ಸಹಾಯ ಮಾಡುತ್ತೇನೆಂದು ಭರವಸೆ ಕೊಟ್ಟರು
ಇದೇ ಸಂದರ್ಭದಲ್ಲಿ
ಸಿರಾಜ್ ಅಭಿಮಾನಿ ಬಳಗದ ಅಧ್ಯಕ್ಷರಾದ ಪ್ರಸನ್ನ ಗೌಡ ಮಾತನಾಡಿ ಕಳೆದ ಮೂರು ವರ್ಷಗಳಿಂದಲೂ ಸಿರಾಜ್ ರವರು ಕಡುಬಡವರು ಅಂಗವಿಕಲರು ಬಡ ವಿದ್ಯಾರ್ಥಿ ಗಳಿಗೆ ಸಹಾಯ ಮಾಡುತ್ತಾ ಬರುತ್ತಿದ್ದಾರೆ ಹೀಗಾಗಿ ಚುನಾವಣೆ ಮುಗಿದ ತಕ್ಷಣವೇ ರೈತ ಎಂ ಡಿ ದೇವೇಸೆಗೌಡರಿಗೆ ಸಹಾಯ ಮಾಡುವುದಾಗಿ ತಿಳಿಸಿದರು

Share this Article
Leave a comment