ಮೈಸೂರು ಮೂಲದ ಯುವಕ ಆಫ್ರಿಕಾದ ಐವರಿಕೋಸ್ಟ್ ನ ಅಬಿಡ್ಜಾನ್ ಬಳಿ ಸಾವು

admin
1 Min Read

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ  ತಾಲ್ಲೂಕಿನ ಟೈಗರ್ ಬ್ಲಾಕ್ ಗ್ರಾಮದ ನಿವಾಸಿ ಎಫ್ರಾಯಿಂ (19) ಬಿನ್ ಅಮಿತ್ ಆಫ್ರಿಕಾ ಪ್ರವಾಸದ ವೇಳೆ ಡೆಂಗ್ಯೂ ಪೀಡಿತನಾಗಿ ಮೃತಪಟ್ಟಿದ್ದಾನೆ.

ಮೃತ ವ್ಯಕ್ತಿಯು ಕಳೆದ ಎರಡು ದಿನಗಳಿಂದ ತೀವ್ರ ಡೆಂಗ್ಯುವಿನಿಂದ ಅನಾರೋಗ್ಯಪೀಡಿತನಾಗಿ ಮೃತಪಟ್ಟಿರುವುದಾಗಿ ಮೃತನ ಜೊತೆಯಲ್ಲಿ ಆಫ್ರಿಕಾದಲ್ಲಿರುವ  ಚಿಕ್ಕಪ್ಪ  ಬಿಲ್ಲ ತಿಳಿಸಿದ್ದಾರೆ.

ಆಫ್ರಿಕಾದ ಐವರಿಕೋಸ್ಟ್ ನ ಅಬಿಡ್ಜಾನ್ ಎಂಬಲ್ಲಿರುವ ಮೃತ ವ್ಯಕ್ತಿಯನ್ನು ವಾರಸುದಾರರಿಗೆ ತಲುಪಿಸುವ ಕೆಲಸವನ್ನು ಭಾರತ ಸರ್ಕಾರ ಮಾಡಬೇಕು ಎಂದು ಗ್ರಾಮದ ಮುಖಂಡ ಮೀನ ರಾಜು ಒತ್ತಾಯಿಸಿದ್ದಾರೆ.

ಮೃತನ ತಂದೆ ಅಮಿತ್, ತಾಯಿ ಮಂಜುಳ ಕೇರಳ ದಲ್ಲಿ ವ್ಯಾಪಾರ ಮಾಡುತ್ತಿದ್ದರು. ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಟೈಗರ್ ಬ್ಲಾಕ್ ಗ್ರಾಮಕ್ಕೆ ಬಂದು ರೋದಿಸುತ್ತಿರುವ ದೃಶ್ಯ ಎಲ್ಲರ ಮನೆ ಕಳಕು ಅಂತಿತ್ತು ಯುವಕನ ಅಕಾಲಿಕ ಸಾವಿನಿಂದ ಸ್ವ-ಗ್ರಾಮ ಟೈಗರ್ ಬ್ಲಾಕ್ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

Share this Article
Leave a comment