ಹೆಚ್.ಡಿ.ಕೋಟೆ ಮತ್ತು ಸರಗೂರು ಕಾರ್ಯನಿರತ ಪತ್ರಕರ್ತರ ಸಂಘ ಉದ್ಘಾಟನೆ…

Janata Theerpu
3 Min Read

ಜನಪರವಾಗಿ, ಜನಹಿತಕ್ಕಾಗಿ ಸಂವಿದಾನದ ಉಳಿವಿಗಾಗಿ, ಸಂವಿಧಾನದ ಆಶಯಗಳ ಉಳಿವಿಗಾಗಿ ಸರ್ವ ಜನಾಂಗದ ಅಭಿವೃದ್ಧಿಗಾಗಿ ಹೆಚ್ ಡಿ ಕೋಟೆ ಮತ್ತು ಸರಗೂರು ಕಾರ್ಯನಿರತ ಪತ್ರಕರ್ತರ ಸಂಘವು ಕೆಲಸ ಮಾಡಲಿ ಎಂದು ದಸಂಸ ಜಿಲ್ಲಾಧ್ಯಕ್ಷ ಬೆಟ್ಟಯ್ಯ ಕೋಟೆ ತಿಳಿಸಿದರು.
ಹೆಚ್ ಡಿ ಕೋಟೆ: ಪುರಸಭೆ ವ್ಯಾಪ್ತಿಯ ಹ್ಯಾಂಡ್ ಪೋಸ್ಟ್ ನ ಮೈರಾಡಪ್ಲಾನ್ ಸಭಾಂಗಣದಲ್ಲಿ ನಡೆದ ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕವನ್ನು ದಸಂಸ ಜಿಲ್ಲಾಧ್ಯಕ್ಷ ಬೆಟ್ಟಯ್ಯಕೋಟೆ, ಅಖಿಲ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚನ್ನಹಳ್ಳಿ ನಿಂಗರಾಜು, ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ಅಧ್ಯಕ್ಷ ಶಿವಣ್ಣ ನೂರಲಕುಪ್ಪೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ನಂತರ ಬೆಟ್ಟಯ್ಯ ಕೋಟೆ ಮಾತನಾಡಿ ನೂತನವಾಗಿ ಹೆಚ್.ಡಿ.ಕೋಟೆ ಮತ್ತು ಸರಗೂರು ಕಾರ್ಯನಿರತ ಪತ್ರಕರ್ತರ ಸಂಘವು ತಾಲ್ಲೂಕಿನಲ್ಲಿ ದೀನ ದಲಿತರ ಪರ, ಜನಪರವಾಗಿ ಕೆಲಸ ಮಾಡಲು ಮುಂದಾಗಬೇಕು, ಪ್ರಸ್ತುತ ವಿದ್ಯಮಾನದಲ್ಲಿ ಈ ದೇಶದಲ್ಲಿ ಕೋಮು ಶಕ್ತಿಗಳು ಒಂದಾಗಿ ಸಮಾಜದಲ್ಲಿ ಸತ್ಯವನ್ನು ಮರೆಮಾಚಿ ಸುಳ್ಳನ್ನು ವೈಭವಿಕರಿಸಲಾಗುತ್ತಿದೆ ಸಂವಿಧಾನದ ಆಶಯಗಳ ವಿರುದ್ದವಾಗಿ ಪ್ರತಿಗಾಮಿತನ ಕೆಲಸ ಮಾಡುತ್ತಿದೆ ಇದರಿಂದಾಗಿ ಸಮಾಜದಲ್ಲಿ ಕೋಮು ಗಲಭೆಗಳು ಹೆಚ್ಚಾಗಿ ಜನರಲ್ಲಿ ಶಾಂತಿ ಸೌಹಾರ್ದತೆ ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಎಂಬ ಮೂರು ಅಂಗಗಳಿದ್ದು, ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಯಾರಿಗೂ ತಿಳಿಯದಾಗಿದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿ ಪತ್ರಿಕಾ ಮಾಧ್ಯಮ ಕೆಲಸ ಮಾಡುತ್ತಿದ್ದು ತನ್ನ ಪತ್ರಿಕಾ ಧರ್ಮವನ್ನು ಮರೆಯ ಬಾರದು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಮಾಡುವ ಮುಖೇನಾ ಸರ್ವ ಜನಾಂಗದ ಶ್ರೇಯೋಭಿವೃದ್ದಿಗಾಗಿ, ತುಳಿತಕೊಳಗಾದವರ ಪರವಾಗಿ, ಸಂವಿಧಾನದ ಉಳಿವಿಗಾಗಿ ಈ ದೇಶದ ಜನರಲ್ಲಿ ಸತ್ಯ ಹೇಳುವ ಮೂಲಕ ಅಸತ್ಯಕ್ಕೆ ನಾಂದಿಯಾಡಬೇಕು ಆಗ. ಮಾತ್ರ ಬುದ್ಧ ಬಸವ ಅಂಬೇಡ್ಕರ್ ರವರ ಸಮ ಸಮಾಜದ ಕನಸನ್ನು ನೆನಸು ಮಾಡಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಧ್ಯಕ್ಷ ಚನ್ನಹಳ್ಳಿ ನಿಂಗರಾಜು ಮಾತನಾಡಿ ಅಖಿಲ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವನ್ನು 2018ರಲ್ಲಿ ಸ್ಥಾಪನೆ ಮಾಡಲಾಯಿತು ಸಂಘವು ನಿರಂತರವಾಗಿ ರಾಜ್ಯದ 19 ಜಿಲ್ಲೆಗಳಲ್ಲಿ ತನ್ನ ಘಟಕಗಳನ್ನು ಸ್ಥಾಪನೆಯಾಗಿ ತನ್ನ ಕಾರ್ಯ ನಿರ್ವಹಿಸುತ್ತಿದೆ ಈ ಸಂಘದ ಉದ್ದೇಶವೇನೆಂದರೆ ಮಾಸಪತ್ರಿಕೆ, ಪಾಕ್ಷಿಕ ಪತ್ರಿಕೆ, ವಾರಪತ್ರಿಕೆ ಹಾಗೂ ಯೂಟ್ಯೂಬ್ ಚಾನಲ್ ರವರಿಗೆ ಬಸ್ ಪಾಸ್ ವಿತರಣೆ ಇರಲಿಲ್ಲ ನಮ್ಮ ಸಂಘವನ್ನು ಪ್ರಾರಂಭಿಸಿದ ಮೇಲೆ ಪ್ರತಿಯೊಬ್ಬರಿಗೂ ಬಸ್ ಪಾಸ್ ವಿತರಣೆ ಮಾಡಲಾಗುತ್ತಿದೆ. ವಾರ್ತಾ ಇಲಾಖೆಯೊಂದಿಗೆ ಮಾತನಾಡಿ ನಮ್ಮ ಸಂಘದಲ್ಲಿ ಸದಸ್ಯತ್ವ ಪಡೆದುಕೊಂಡವರಿಗೆ ವಾರ್ಷಿಕವಾಗಿ 1 ಲಕ್ಷದ ವರೆಗೆ ಆರೋಗ್ಯವಿಮೆ ನೀಡಲಾಗುತ್ತಿದೆ ಎಂದರು.
ಗುಜರಾತಿನಲ್ಲಿ ನಡೆದ ನಡೆದ 75ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಕೇಂದ್ರ ಸಚಿವರ ಜೊತೆ ಮಾತನಾಡಿ ಮಾಸಿಕ ವೇತನವನ್ನು ನೀಡಲು ಈಗಾಗಲೆ ಸರ್ಕಾರ ಸುತ್ತೋಲೆ ಹೊರಡಿಸಿದೆ ಇದು ಕೂಡ ರಾಜ್ಯದಲ್ಲಿ ಚುನಾವಣೆ ಮುಗಿದ ಬಳಿಕ ಚಾಲ್ತಿಗೆ ಬರಲಿದೆ ಎಂದು ತಿಳಿಸಿದರು.
ನಮ್ಮ ಸಂಘವು ಪ್ರತಿಯೊಬ್ಬ ನೊಂದ ಪತ್ರಕರ್ತನಿಗೂ ದ್ವನಿಯಾಗಬೇಕು ಈಗಾಗಲೆ ಮೈಸೂರು, ಹುಣಸೂರಿನಲ್ಲಿ ಸಂಘವನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ನಂಜನಗೂಡು, ಟಿ. ನರಸಿಪುರದಲ್ಲಿ ತಾಲ್ಲೂಕು ಘಟಕಗಳನ್ನು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು ಅಖಿಲ ಕರ್ನಾಟಕ ಕಾರ್ಯನಿರತರ ಸಂಘವನ್ನು ರಾಜ್ಯದ ಮಾದರಿ ಸಂಘವನ್ನಾಗಿ ಮಾಡುವ ಕನಸು ನಮ್ಮೆಲ್ಲರದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನಿಸಲಾಯಿತು. ನಂತರ ಸಂಘದ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಜಿ. ರಘುರಾಮ, ಶ್ರೀಮತಿ ಲಾವಣ್ಯ, ಗೌರವಾಧ್ಯಕ್ಷ ಮಲಾರ ಮಹದೇವಸ್ವಾಮಿ, ಕಾನೂನು ಸಲಹೆಗಾರರು ಚೌಡಳ್ಳಿ ಜವರಯ್ಯ, ಪ್ರಧಾನ ಕಾರ್ಯದರ್ಶಿ ಕಬಿನಿ ಶಿವಲಿಂಗ, ಖಜಾಂಚಿ ಪ್ರಸನ್ನ ಸಿಜೆ, ನಿರ್ದೇಶಕರುಗಳಾದ ಮಹದೇವಸ್ವಾಮಿಕೋಟೆ, ಮುರುಳೀಧರ ಜಕ್ಕಹಳ್ಳಿ, ರಾಜೇಶ್ ಹಂಪಾಪುರ, ಮಲಾರ ಚಂದ್ರಶೇಖರ ಮೂರ್ತಿ, ಆಗತ್ತೂರು ಜವರನಾಯಕ, ವರ್ತಕರ ಸಂಘದ ಅಧ್ಯಕ್ಷ ಲಕ್ಷ್ಮಿನರಸಿಂಹೇಗೌಡ, ಬೆಂಗಳೂರು ಜಾನವಿ, ಹುಣಸೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚೆಲುವರಾಜು ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದರು.

Share this Article
Leave a comment