ರಾಯಚೂರು ಜಿಲ್ಲೆಗೆ ಏಮ್ಸ್ ಸಂಸ್ಥೆ ಸ್ಥಾಪನೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ

admin
2 Min Read

ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರು ಜಿಲ್ಲೆಗೆ ಏಮ್ಸ್ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಸ್ಥಾಪನೆ ಮಾಡಬೇಕೆಂದು ರಾಯಚೂರು ಜಿಲ್ಲಾ ಏಮ್ಸ್ ಸಂಸ್ಥೆ ಸ್ಥಾಪನೆ ಮಾಡಬೇಕೆಂದು ಇಂದಿಗೆ 250ನೇ ದಿನಕ್ಕೆ ಧರಣಿಯು ಪೂರೈಸಿದೆ ಸರ್ಕಾರ ಇದರ ಬಗ್ಗೆ ನಿರ್ಲಕ್ಷಿಸಿದೆ ಈ ಹೋರಾಟದಲ್ಲಿ ಪಾಲ್ಗೊಂಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎ. ರಂಗಣ್ಣ ಪಾಟೀಲ್ ಇವರು ಮಾತನಾಡಿ ಸರ್ಕಾರವು ನಮ್ಮ ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಹಾಗೂ ಹೋರಾಟಗಾರರ ಬೇಡಿಕೆಯನ್ನು ಸ್ಪಂದನೆ ನೀಡುತ್ತಿಲ್ಲ ಜಿಲ್ಲೆಯ ಶಾಸಕರು ಸಂಸದರು ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳು ರಾಯಚೂರು ಏಮ್ಸ್ ಸಂಸ್ಥೆ ಹೋರಾಟ ದರಣಿ ಸ್ಥಳಕ್ಕೆ ಭೇಟಿ ನೀಡಿ ಸುಳ್ಳು ಆಶ್ವಾಸನೆ ಭರವಸೆಗಳನ್ನು ನೀಡುತ್ತಿದ್ದಾರೆ ಪಕ್ಷಾತೀತವಾಗಿ ಜಿಲ್ಲೆಯಲ್ಲ ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಹೋರಾಟಗಾರರ ಬೇಡಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಹಾಗೂ ಸರ್ಕಾರ ಇನ್ನು ಮುಂದೆ ಕೂಡ ಎಚ್ಚೆತ್ತುಕೊಂಡು ಹೋರಾಟಗಾರ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು ಈ ಹೋರಾಟದಲ್ಲಿ ಪಾಲ್ಗೊಂಡ ಜಿಲ್ಲಾ ಎಂ ಆರ್ ಎಚ್ ಎಸ್ ಅಧ್ಯಕ್ಷರಾದ ಹನುಮಂತ ಮನ್ನಾಪುರ್ ಮಾತನಾಡಿ ಕಲ್ಯಾಣ ಕರ್ನಾಟಕವನ್ನು ಅದರಲ್ಲೂ ವಿಶೇಷವಾಗಿ ರಾಯಚೂರು ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿತು ಇದು ಈ ಧೋರಣೆಯನ್ನು ಸರ್ಕಾರ ಕೂಡಲೇ ಕೈಬಿಟ್ಟು ರಾಯಚೂರು ಜಿಲ್ಲೆ ಗೆ ಏಮ್ಸ್ ಸಂಸ್ಥೆಯನ್ನು ಮಂಜೂರು ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಚ್. ಶಿವರಾಜ್ ಹಾಗೂ ಮಹಿಳಾ ಮುಖಂಡರಾದ ರಂಗಮ್ಮ ಇವರುಗಳು ಮಾತನಾಡಿ ರಾಯಚೂರು ಜಿಲ್ಲೆಗೆ ಸರ್ಕಾರ ಏಮ್ಸ್ ಮಾದರಿಯ ಆಸ್ಪತ್ರೆಯನ್ನು ಸ್ಥಾಪಿಸಬೇಕೆಂದು ಸಿದ್ಧತೆ ನಡೆಸಿದೆ ಇದನ್ನು ಈ ಕೂಡಲೇ ಕೈಬಿಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು ಈ ಸಂದರ್ಭದಲ್ಲಿ ನರಸಿಂಹ ಸರ್ಕಿಲ್ ಮಾಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಚಿದಾನಂದಪ್ಪ ಶಿವಂಗಿ ಚಲವಾದಿ ಮಹಾಸಭಾ ಅಧ್ಯಕ್ಷರು ಖಾಜಾಹುಸೇನ್ ಅಧ್ಯಕ್ಷರು ಟೇಲರ್ ಸಂಘ ಶಿವರಾಜ್ ರುದ್ರಾಕ್ಷಿ ಅಲೆಮಾರಿ ಸಂಘದ ಅಧ್ಯಕ್ಷರು ಡಿ ಶ್ರೀನಿವಾಸ್ ಕರವೇ ಅಧ್ಯಕ್ಷರು ಶಿವಕುಮಾರ್ ಚಲವಾದಿ ನಗರ ಘಟಕ ಕರವೇ ಅಧ್ಯಕ್ಷರು ಸನಾತನ ಸಂಸ್ಥೆಯ ಸಂಸ್ಥೆಯ ಅಧ್ಯಕ್ಷರಾದ ರಾಚೆನ್ನ ಟೇಲರ್ ರಮೇಶ್ ಖಾನಾಪುರ್ ವೆಂಕಟೇಶ್ ಜಾಲಹಳ್ಳಿ ವೆಂಕಟೇಶ್ ಜಾಲಹಳ್ಳಿ ಹನುಮಂತ ಬೇರಿ ಭೀಮರಾಯ ಭಂಡಾರಿ ರಮೇಶ್ ಕಾರ್ಪೆಂಟರ್ ಮಲ್ಲಿಕಾರ್ಜುನ್ ಶಾಖಾಪುರ್ ಲಕ್ಷ್ಮಿಕಾಂತ್ ದಾಸರ್ ಶ್ರೀನಿವಾಸ್ ನಾಯಕ್ ಕರವೇ ಮರಿಯಪ್ಪ ರಾಯಚೂರು ಕರ್ ಸೇರಿದಂತೆ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು

Share this Article
Leave a comment